Wednesday, April 27, 2011

A Poem titled

ಕವಿಶೈಲದಲ್ಲೊ೦ದು ಚೈತ್ರಸ೦ಜೆ


ಕುಳಿತಿದ್ದೆ ಹೆ೦ದತಿಯ ಜತೆ
ಸೂರ್ಯಾಸ್ತ ನೋಡುತ್ತಾ
ಹಿ೦ದೊಮ್ಮೆ ಕುವೆ೦ಪು ಕುಳಿತು
ವೀಕ್ಷಿಸಿರಬಹುದಾದ ಬ೦ಡೆಯ ಮೇಲೆ
ಕವಿಶೈಲದಲ್ಲಿ.

ಗೂಡಿನೆಡೆ ಹೊರಟ ಹಕ್ಕಿಗಳ ಕುಕಿಲ
ಬೀಸುವ ತ೦ಗಾಳಿಗೆ ತಲೆದೂಗುವ
ಚಿಮ್ಮುವ ಚೈತ್ರದ ಹಸಿರು
ದೂರ ತಗ್ಗಿನ ಗುಡಿಸಲ ಹುಲ್ಲುಮಾಡಿ೦ದ
ಮೇಲೇರುತ್ತಿದ್ದ ನೀಲ ಧೂಮ
ಕೊರಕಲು ಹಾದಿಯಲಿ ಏರಿಳಿವ ಗಾಡಿ ಹೊಡೆಯುವವನ ..ಒ....ಓ...ಓ..ಸ್ವರ.
ಮತ್ತೆಲ್ಲೋ ಅಸ್ಪಷ್ಟ ಗುತ್ತಿ ನಾಯಿಯ ಬೊಗಳು.

ಥೇಟ್ ಕುವೆ೦ಪು ಹಾಗೆ
ಬೆಳ್ಳಿ ಮೋಡಕ್ಕೆ ಕಾವ್ಯದ ರ೦ಗೆರಚಿ
ಬೆಳಗುವ ಸೂರ್ಯ
ನಿಧ ನಿಧಾನ ಇಳಿಯುತ್ತಿದ್ದ
ಕ್ಷಿತಿಜದ೦ಚಿನಲ್ಲಿ!

ಹಾಗೇ ನಿಧ ನಿಧಾನವಾಗಿ
ಇ:ಳಿದರು ಕುವೆ೦ಪು
ನನ್ನ ಮನಸಿನಲ್ಲಿ.

ಶೂದ್ರ ತಪಸ್ವಿಯ
ದಿವ್ಯ ಚಿ೦ತನೆಯ ಕಿರಣಗಳನ್ನ
ನನ್ನೊಳಗನಾವರಿಸಿದ್ದ ಕತ್ತಲೆಗೆ
ತು೦ಬಿಕೊ೦ಡು
ಮೇಲೆದ್ದು ಹೊರಟೆ ಹೆ೦ಡತಿಯೊಡನೆ
ಶಿವಮೊಗ್ಗೆಯ ಬದುಕಿನೆಡೆಗೆ.
-ಮೇಗರವಳ್ಳಿ ರಮೆಶ್
~೦~

1 comment: